ಸಾಲ್ಸಾ ಎಂಬುದು ಪಾಶ್ಚಾತ್ಯ ನೃತ್ಯ ಪ್ರಕಾರಗಳಲ್ಲಿ ಒಂದು.ಮೂಲತಃ ಆಫ್ರಿಕಖಂಡದ ಕೆರಿಬಿಯನ್ ದ್ವೀಪಸಮೂಹದಲ್ಲಿನ ಸ್ಪೇನ್ ಜನತೆಯಿಂದ ಉದ್ಭವಗೊಂಡ ಕಲೆಯಿದು. ಸಾಮಾನ್ಯವಾಗಿ ಸಾಲ್ಸಾ ನೃತ್ಯವೆಂಬುದು ಗಂಡು,ಹೆಣ್ಣುಗಳಿಬ್ಬರೂ ಮಿಳಿತಗೊಂಡು ಪರಸ್ಪರರ ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯಾಗಿದೆ. ಸ್ಪಾನಿಷ್ ಭಾಷೆಯಲ್ಲಿ ಸಾಲ್ಸಾ ಅಂದರೆ (ಖಾರದ ರುಚಿಯಿರುವ)ಸಾಸ್ ಅಂತ ಅರ್ಥವಿದೆ.ರುಂಬಾ,ಮ್ಯಾಂಬೋ,ಚಾ-ಚಾ-ಚಾ ಮುಂತಾದವುಗಳು ಸಾಲ್ಸಾ ನೃತ್ಯದ ಒಳಪ್ರಕಾರಗಳಾಗಿವೆ.